Ration card correction : ರೇಷನ್ ಕಾರ್ಡ್ ತಿದ್ದುಪಡಿಗೆ ಪ್ರತಿ ತಿಂಗಳು 10ರ ವರೆಗೆ ಅವಕಾಶ
ಆಹಾರ ಇಲಾಖೆ ಅಧಿಕಾರಿಗಳ ಸ್ಪಷ್ಟನೆ
ರೇಷನ್ ಕಾರ್ಡ್ ತಿದ್ದುಪಡಿಗೆ (Ration card correction) ಜನವರಿ 31 ಕೊನೆಯ ದಿನಾಂಕವಾಗಿದ್ದು; ಇನ್ಮುಂದೆ ತಿದ್ದುಪಡಿಗೆ ಅವಕಾಶ ಸಿಗುವುದು ಕಷ್ಟಕರ ಎಂಬ ವದಂತಿ ಹಬ್ಬಿದೆ. ಹೀಗಾಗಿ ರೇಷನ್ ಕಾರ್ಡ್’ದಾರರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಮುಂದೆ ಜಮಾಯಿಸುತ್ತಿದ್ದಾರೆ.
ರೇಷನ್ ಕಾರ್ಡ್ ತಿದ್ದುಪಡಿಗೆ 2024ರ ಡಿಸೆಂಬರ್ ವರೆಗೆ ಆಹಾರ ಇಲಾಖೆ ಅವಕಾಶ ನೀಡಿತ್ತು. ಕಾರ್ಡ್’ದಾರರ ಬೇಡಿಕೆ ಮೇರೆಗೆ ಪುನಃ ತಿದ್ದುಪಡಿ ಪ್ರಕ್ರಿಯೆಯನ್ನು ಜನವರಿ 31ರ ವರೆಗೆ ವಿಸ್ತರಿಸಿದೆ. ಆನಂತರ ತಿದ್ದುಪಡಿಗೆ ಅವಕಾಶ ಸಿಗುವುದಿಲ್ಲ ಎಂಬ ವದಂತಿಗೆ ಆಹಾರ ಇಲಾಖೆ ಅಧಿಕಾರಿಗಳು ಇದೀಗ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: LIC Kanyadan Policy : ಈ ಯೋಜನೆಯಡಿ ಸಿಗಲಿದೆ ಹೆಣ್ಮಕ್ಕಳ ಮದುವೆಗೆ 31 ಲಕ್ಷ ರೂಪಾಯಿ
ಪ್ರತಿ ತಿಂಗಳ 10ರ ವರೆಗೆ ತಿದ್ದುಪಡಿಗೆ ಅವಕಾಶ
ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಪಡಿತಚೀಟಿ ತಿದ್ದುಪಡಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಕಾರ್ಡ್’ದಾರರು ಯಾವುದೇ ರೀತಿಯ ಆತಂಕಪಡುವ ಅವಶ್ಯಕತೆ ಇಲ್ಲ.
ಇನ್ಮುಂದೆ ಪ್ರತಿ ತಿಂಗಳು 1ರಿಂದ 10ನೇ ತಾರೀಖಿನ ವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ತಿಂಗಳ ಕೊನೆಯ ವಾರದಲ್ಲೂ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಆಹಾರ ಇಲಾಖೆ ಅಧಿಕಾರಿಗಳು ವದಂತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
ಏನೇನು ತಿದ್ದುಪಡಿಗೆ ಅವಕಾಶವಿದೆ?
- ಬಿಪಿಎಲ್, ಎಪಿಎಲ್ ಕಾರ್ಡ್’ನಲ್ಲಿರುವ ಸದಸ್ಯರ ಹೆಸರು ಡಿಲೀಟ್
- ಹೊಸ ಹೆಸರು ಸೇರ್ಪಡೆ
- ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾರ್ಡ್ ವಿಳಾಸ ಬದಲಾವಣೆ
- ರೇಷನ್ ಕಾರ್ಡ್’ಗೆ ಆಧಾರ್ ಜೋಡಣೆ (ಇಕೆವೈಸಿ) ಪ್ರಕ್ರಿಯೆ
- ಅಕ್ಕಿ ಪಡೆಯುವ ನ್ಯಾಯಬೆಲೆ ಅಂಗಡಿಗಳ ವಿಳಾಸ ಬದಲಾವಣೆ
ಇವರಿಗೆ ಮಾತ್ರ ಹೊಸ ರೇಷನ್ ಕಾರ್ಡ್
ಹೊಸ ಪಡಿತರ ಚೀಟಿ ಕೋರಿ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದೆ. ಆದರೆ, ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ನೀಡುವುದನ್ನು ಸದ್ಯ ಆಹಾರ ಇಲಾಖೆ ನಿಲ್ಲಿಸಿದೆ.
ಪಡಿತರ ಚೀಟಿಗಾಗಿ ಹಿಂದೆ ಸಲ್ಲಿಸಿದ್ದ ಲಕ್ಷಾಂತರ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ತಟಸ್ಥವಾಗಿದೆ. ಸರ್ಕಾರದ ಅನುಮತಿ ಮೇರೆಗೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ಮಾತ್ರ ಹೊಸ ಬಿಪಿಎಲ್ ಕಾರ್ಡ್ ಮಂಜೂರು ಮಾಡಲಾಗುತ್ತಿದೆ.
E-Swathu : ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ?